Photos of R S Iyer Tumkur

*ಆರ್.ಎಸ್.ಅಯ್ಯರ್ ಫೋಟೋಗಳು :- http://rsiyertumkur.blogspot.com *ಡಿವಿಜಿ ನೆನಪು ಕಾರ್ಯಕ್ರಮ:-https://sarasdvgnenapu.blogspot.com *ವಿಶ್ವನಾಥನ್ ಪತ್ರಗಳು https://vishwanathanletters.blogspot.com

Sunday, 4 February 2024

Beauty of Letters - ಪತ್ರ ಸೌಂದರ್ಯ

ಈಗ ಇ-ಮೇಲ್, ವಾಟ್ಸಾಪ್, ಮೊಬೈಲ್ ಯುಗ. ಎಲ್ಲವೂ ಕೈಬೆರಳ ತುದಿಯಲ್ಲೇ ಮುಗಿದುಹೋಗುತ್ತದೆ. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಜಗತ್ತಿನ ಯಾವುದೇ ಮೂಲೆಗಾದರೂ ಸಂದೇಶ ರವಾನೆಯಾಗಿಬಿಡುತ್ತದೆ. ಆದರೆ ಮೂರು ದಶಕಗಳ ಮುಂಚೆ ಇವುಗಳಾವುವೂ ಇರಲಿಲ್ಲ. ಆಗ ಏನಿದ್ದರೂ. ಎಲ್ಲವೂ ಪತ್ರ ವ್ಯವಹಾರದಲ್ಲೇ- ಕೈಬರಹದಲ್ಲೇ ಸಾಗಬೇಕಿತ್ತು. ಯೋಚಿಸಿ, ಆಲೋಚಿಸಿ ಬರೆಯಬೇಕಾಗಿತ್ತು. ಅಂಚೆ ಇಲಾಖೆ ಮೂಲಕವೇ ಪತ್ರ ರವಾನೆ ಹಾಗೂ ಪತ್ರ ಸ್ವೀಕಾರದ ವ್ಯವಸ್ಥೆಯಿತ್ತು. "ಇಂದು ಪೋಸ್ಟ್ ಮನ್ ಬಂದರೆ ? ಏನಾದರೂ ಲೆಟರ್ ಬಂತೇ?" ಎಂದು ಕೌತುಕದಿಂದ ಕಾಯಬೇಕಾಗಿತ್ತು.  ಕ್ಷೇಮ-ಕುಶಲೋಪರಿಯೊಂದಿಗೆ ಪತ್ರ ಬರೆಯಲೊಂದು ವಿಧಾನವೂ ಇತ್ತು. ಆ ಭಾವ ವಿನಿಮಯದ ಸೌಂದರ್ಯವೇ ಅದ್ಭುತ ಸ್ವರೂಪದ್ದಾಗಿತ್ತು. ಆ ಕಾಲದಲ್ಲಿ ಅನೇಕ ಮಹನೀಯರು, ಮಿತ್ರರು, ನಮ್ಮ ತಂದೆಯವರು, ಬಂಧುಗಳು, ಇತರರು ಬರೆದಿದ್ದ ಕೆಲವು ಪತ್ರಗಳು ನನ್ನ ಸಂಗ್ರಹದಲ್ಲಿವೆ. ಅವುಗಳನ್ನೋದಿಗಾಗಲೆಲ್ಲ ಉಂಟಾಗುವ ಭಾವನೆಗಳು ಅವರ್ಣನೀಯ. ಅಂತಹ ಕೆಲವು ಪತ್ರಗಳನ್ನು (ಈಗಿನ ಪೀಳಿಗೆಗೆ ಆ "ಪತ್ರ ಸೌಂದರ್ಯ"ದ ಮಹತ್ವ ಅರಿವಿಗೆ ಬರಲೆಂಬ ಆಶಯದಿಂದ) ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

 - ಆರ್.ಎಸ್.ಅಯ್ಯರ್, ತುಮಕೂರು

-------------------------------------------------------------------------

ಹಿಮಾಲಯದ ಪ್ರಸಿದ್ಧ ಪುಣ್ಯಕ್ಷೇತ್ರ ಗಳಲ್ಲೊಂದಾದ ಹೃಷಿಕೇಶದಲ್ಲಿ ನೆಲೆಸಿ ಯೋಗ ಹಾಗೂ ಅಧ್ಯಾತ್ಮದಿಂದ ಆ ಕಾಲದಲ್ಲೇ ಜಗದ್ವಿಖ್ಯಾತರಾಗಿದ್ದ ಪ.ಪೂ. ಶ್ರೀ ಸ್ವಾಮಿ ಶಿವಾನಂದಜಿ ಅವರಿಗೆ 1958 ರಲ್ಲಿ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ಅವರು ಒಂದು ಪತ್ರ ಬರೆದಿದ್ದರಂತೆ. ಆ ಪತ್ರಕ್ಕೆ ಸ್ವಾಮೀಜಿಯವರು ಪ್ರತ್ಯುತ್ತರ ರೂಪದಲ್ಲಿ ಬರೆದಿರುವ ಅಮೂಲ್ಯ ಹಾಗೂ ಸಾರ್ವತ್ರಿಕ ಸಂದೇಶವುಳ್ಳ ಪತ್ರವಿದು.



___________________________________________

Swamy Purushottamanandaji Letter




-----------------------------------------------------------

Swamy Purushottamanandaji letter



**********************************************

Sri Swamy Purushottamanandaji's Letter






***********************************************

Sri Swamy Purushottamanandaji's Letter


________________________________________

KSRTC M.D. Letter

ತುಮಕೂರು ನಗರದಲ್ಲಿ 2011 ರಲ್ಲಿ ಆರಂಭವಾದ "ಸಿಟಿ ಬಸ್" ಸೌಲಭ್ಯದ ಬಗ್ಗೆ ನಾನೊಂದು ವಿಶೇಷ ಲೇಖನ ಬರೆದಿದ್ದೆ. ಅದನ್ನೋದಿದ ಕೆ.ಎಸ್.ಆರ್.ಟಿ.ಸಿ.ಯ  ಆಗಿನ  ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಗೌರವ್ ಗುಪ್ತ I.A.S. ಅವರು ಅಂದೇ E-Mail ಮೂಲಕ ನೀಡಿದ್ದ ಪ್ರತಿಕ್ರಿಯೆ ಇದು. 

******************************************

ಪ.ಪೂ. ಶ್ರೀ ಸ್ವಾಮಿ ಪುರುಷೋತ್ತಮಾನಂದಜಿಯವರ ಆ ಒಂದು ಪತ್ರ...











*********************************************

R S S ಹಿರಿಯ ಪ್ರಚಾರಕರಾದ ಶ್ರೀ ಸು.ರಾಮಣ್ಣನವರ ಪತ್ರ

1992 ರ ಆ ಅಮೂಲ್ಯ "ಪ್ರಶಸ್ತಿ"...
---------------------------

1992 ರ ಜನವರಿಯಲ್ಲಿ ತುಮಕೂರಿನ ಗೊಲ್ಲಹಳ್ಳಿಯ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಟ್ಟಡದಲ್ಲೊಂದು ಕಾರ್ಯಕ್ರಮ. ಆರ್.ಎಸ್.ಎಸ್. ನ ಹಿರಿಯ ಪ್ರಚಾರಕರಾದ ಶ್ರೀ ಸು.ರಾಮಣ್ಣನವರ ಬೌದ್ಧಿಕ್. ವರದಿಗೆಂದು ನಾನು ಹೋಗಿದ್ದೆ. ಶ್ರೀ ಸು.ರಾಮಣ್ಣನವರು ಅದ್ಭುತ ಚಿಂತಕರಷ್ಟೇ ಅಲ್ಲದೆ ಪ್ರಖರ ವಾಗ್ಮಿಗಳೂ ಹೌದು. ಅಷ್ಟೇ ಅಲ್ಲ, ಕಂಚಿನ ಕಂಠದಿಂದ ಸುಶ್ರಾವ್ಯವಾಗಿ ಗೀತೆಗಳನ್ನೂ ಹಾಡಬಲ್ಲವರಾಗಿದ್ದರು. ಅಂದು ಅವರು ಅತ್ಯಂತ ವಿಚಾರಪೂರಿತ ಭಾಷಣ ಮಾಡಿದ್ದರು. ಅದನ್ನು ನಾನು ಸುದೀರ್ಘವಾಗಿಯೇ ವರದಿ ಮಾಡಿದ್ದೆ. ಸದರಿ ಸುದ್ದಿ ಪ್ರಕಟಗೊಂಡಿದ್ದ ಪತ್ರಿಕೆಯನ್ನು ಅಂಚೆ ಮೂಲಕ ಬೆಂಗಳೂರಿನ "ಕೇಶವಕೃಪ"ಕ್ಕೆ ಕಳಿಸಿದ್ದೆ. ಅದನ್ನೋದಿದ ಬಳಿಕ ಶ್ರೀ ಸು.ರಾಮಣ್ಣನವರು ಪೋಸ್ಟ್ ಕಾರ್ಡ್ ನಲ್ಲಿ ತಮ್ಮ ಪ್ರತಿಕ್ರಿಯೆ ಬರೆದಿದ್ದರು. ಅವರ ಆ ಪತ್ರವೇ ಒಂದು "ಅತ್ಯಮೂಲ್ಯ ಪ್ರಶಸ್ತಿ" ಎನಿಸಿ ಹಾಗೆಯೇ ಸಂಗ್ರಹಿಸಿಟ್ಟಿದ್ದೆ. 32 ವರ್ಷಗಳ ಹಿಂದಿನ ಆ ಪತ್ರ ಫೈಲ್ ಒಂದರಲ್ಲಿ ಕಾಣಿಸಿತು.

ಇ-ಮೇಲ್, ಮೊಬೈಲ್, ವಾಟ್ಸಾಪ್ ಮೊದಲಾದ ಆಧುನಿಕ ತಂತ್ರಜ್ಞಾನದ ಭರಾಟೆಯ ಎದುರು, ಅದ್ಭುತ ಅನುಭೂತಿ ಉಂಟುಮಾಡುತ್ತಿದ್ದ ಆ "ಪತ್ರ ಸಂಸ್ಕೃತಿ"ಯೇ ಕಣ್ಮರೆಯಾಗಿರುವ ಈ ಹೊತ್ತಿನಲ್ಲಿ, ಈಗಿನವರಿಗೆ ಇಂತಹ "ಪತ್ರಬರಹ"ಗಳ ಪರಿಚಯ ಆಗಲೆಂಬ ಸದಾಶಯದಿಂದ ಇಲ್ಲಿ ಹಂಚಿಕೊಂಡಿದ್ದೇನೆ.

-ಆರ್.ಎಸ್.ಅಯ್ಯರ್, ತುಮಕೂರು,