Photos of R S Iyer Tumkur

*ಆರ್.ಎಸ್.ಅಯ್ಯರ್ ಫೋಟೋಗಳು :- http://rsiyertumkur.blogspot.com *ಡಿವಿಜಿ ನೆನಪು ಕಾರ್ಯಕ್ರಮ:-https://sarasdvgnenapu.blogspot.com *ವಿಶ್ವನಾಥನ್ ಪತ್ರಗಳು https://vishwanathanletters.blogspot.com

Thursday, 25 November 2021

ಶ್ರೀ ಜಿ.ಎಂ.ರಾಜಾಚಾರ್ ರವರ ಬಗ್ಗೆ ಲೇಖನ- 'ಧ್ಯೇಯಕಮಲ'- ನವೆಂಬರ್ 2021- Article Sri G M Rajachar, 'Dhyeya Kamala' Magazine

 ಸಜ್ಜನಿಕೆ-ಸಾತ್ವಿಕತೆಯ ಶ್ರೀ ಜಿ.ಎಂ.ರಾಜಾಚಾರ್ ರವರು....

-------------------------------------------------
ಬಿಜೆಪಿಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಎಲ್ಲ ಪ್ರಮುಖ ನಾಯಕರ ಅತಿ ಹತ್ತಿರದ ಒಡನಾಟವಿದ್ದರೂ, ಆ ಯಾವುದೇ ಪ್ರಭಾವವನ್ನೂ- ಪರಿಚಯವನ್ನೂ ಕಿಂಚಿತ್ತೂ ದುರುಪಯೋಗಪಡಿಸಿಕೊಳ್ಳದೆ ಬಿಜೆಪಿಯಲ್ಲಿ ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸುವುದರಲ್ಲೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದವರೆಂದರೆ “ನಮ್ಮ ತುಮಕೂರು” ನಗರದ ಚಿಕ್ಕಪೇಟೆಯ ಆಚಾರ್ಯರ ಬೀದಿ ನಿವಾಸಿಗಳಾಗಿದ್ದ ದಿವಂಗತ ಶ್ರೀ ಜಿ.ಎಂ.ರಾಜಾಚಾರ್ ರವರು.
ಬಿಜೆಪಿಯ ರಾಜ್ಯ ಕಾರ್ಯಾಲಯ ಕಾರ್ಯದರ್ಶಿಗಳಾಗಿದ್ದ ಅವರು, ಪತ್ರಕರ್ತರೂ ಆಗಿದ್ದವರು. ಅವರನ್ನು ನೆನೆದಾಗಲೆಲ್ಲ ಮನದಲ್ಲಿ ಮೂಡುವುದು ಅವರ ಸಜ್ಜನಿಕೆ ಹಾಗೂ ಸಾತ್ವಿಕ ವ್ಯಕ್ತಿತ್ವ. ಅವರನ್ನು ಕುರಿತು ನಾನು ಬರೆದಿರುವ ಒಂದು ಪುಟ್ಟ 'ಸ್ಮೃತಿ ಲೇಖನ' ರಾಜ್ಯ ಬಿಜೆಪಿ ಪ್ರಕಟಿಸುವ “ಧ್ಯೇಯ ಕಮಲ” ಮಾಸ ಪತ್ರಿಕೆಯಲ್ಲಿ ಈ ತಿಂಗಳು ಪ್ರಕಟವಾಗಿದೆ.
ಲೇಖನ ಬರೆಯುವಂತೆ ಪ್ರೇರೇಪಿಸಿದ ಹಾಗೂ ಅದನ್ನು ಪ್ರಕಟಿಸಿದ “ಧ್ಯೇಯ ಕಮಲ”ದ ಸಂಪಾದಕರೂ, ಆತ್ಮೀಯ ಮಿತ್ರರೂ ಆದ ಶ್ರೀ ಬಿದರೆ ಪ್ರಕಾಶ್ ರವರಿಗೆ ಅನಂತ ಧನ್ಯವಾದಗಳು.
-ಆರ್.ಎಸ್.ಅಯ್ಯರ್, ತುಮಕೂರು, 25-11-2021





Friday, 28 May 2021

2021 May




----------------------------------------------------------------------------------------------------------------------------